ವಾರದ ಉಚಿತ ಜ್ಯೋತಿಷ್ಯ ಭವಿಷ್ಯ (26 Oct 2020 - 1 Nov 2020) - ಪಂಡಿತ್ ಶ್ರೀ ಚಂದ್ರ ಶೇಖರ್ ಗುರುಜಿ.

 ವಾರದ ಉಚಿತ ಜ್ಯೋತಿಷ್ಯ ಭವಿಷ್ಯ (26 Oct 2020 - 1 Nov 2020)

  ಮೊಬೈಲ್ ನಂಬರ :- 9845839481   /   ವೆಬ್‌ಸೈಟ್ :- http://www.raghavendraastro.com

ಮೇಷ ಸಾಪ್ತಾಹಿಕ ಜಾತಕ / Aries Weekly Horoscope. 

(26 Oct 2020 - 1 Nov 2020)

ವಾರದ ಆರಂಭದಲ್ಲಿ ಚಂದ್ರ ಮೇಷ ರಾಶಿಚಕ್ರದ ಹನ್ನೆರಡನೇ ಮನೆಗೆ ಸಾಗುತ್ತಾರೆ. ಈ ಮನೆಯನ್ನು ಲಾಭದ ಮನೆಯೆಂದು ಕರೆಯಲಾಗುತ್ತದೆ. ಈ ಮನೆಯಲ್ಲಿ ನೆಲೆಗೊಂಡಿರುವ ಚಂದ್ರ ಕೆಲಸದ ಸ್ಥಳದಲ್ಲಿ ನಿಮಗೆ ಗೌರವವನ್ನು ನೀಡುತ್ತಾರೆ. ಕುಟುಂಬ ಜೀವನದ ಬಗ್ಗೆ ಮಾತನಾಡಿದರೆ, ಹಿರಿಯ ಸಹೋದರ ಸಹೋದರಿಯರ ಬೆಂಬಲವನ್ನು ನೀವು ಪಡೆಯುತ್ತೀರಿ. ಈ ರಾಶಿಚಕ್ರದ ವಿದ್ಯಾರ್ಥಿಗಳು ಶಿಕ್ಷಣದ ಕ್ಷೇತ್ರದಲ್ಲಿ ಮುಂದುವರಿಯುತ್ತಾರೆ. ದೀರ್ಘಕಾಲದ ರೋಗದಿಂದ ಬಳಲುತ್ತಿದ್ದ ಜನರು ಈ ಸಮಯದಲ್ಲಿ ಮುಕ್ತಿ ಪಡೆಯಬಹುದು.
ವಾರದ ಮಧ್ಯದಲ್ಲಿ ಚಂದ್ರ ನಿಮ್ಮ ಹನ್ನೆರಡನೇ ಮನೆಗೆ ಸಾಗುತ್ತಾರೆ. ಈ ಮನೆಯನ್ನು ನಷ್ಟದ ಮನೆಯೆಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಹಣಕಾಸಿನ ಹೂಡಿಕೆ ಮತ್ತು ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ ಸ್ವಲ್ಪ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ನೀವು ಯಾವುದೇ ಕಾಗದಪಾತ್ರಗಳ ಕೆಲಸದಲ್ಲಿ ತೊಡಗಿದ್ದರೆ, ಖಂಡಿತವಾಗಿಯೂ ನಿಮ್ಮ ಸುತ್ತಲೂ ನಿಷ್ಠಾವಂತ ಜನರನ್ನು ಇರಿಸಿ. ಯಾವುದೇ ನಿರ್ಧಾರಕ್ಕೆ ತಲುಪುವ ಅನುಭವಿ ಜನರ ಸಲಹೆಯನ್ನು ಪಡೆದುಕೊಳ್ಳಬೇಕು. ಈ ವಾರ ಉನ್ನತ ಅಧಿಕಾರಿಗಳ ಪ್ರಶಂಸೆಯನ್ನು ಪಡೆಯಬಹುದು. ಈ ಕಾರಣದಿಂದಾಗಿ ನೀವು ಸಂತೋಷ ಪಡೆಯುತ್ತೀರಿ.
ವಾರದ ಅಂತ್ಯದಲ್ಲಿ ಚಂದ್ರ ನಿಮ್ಮ ಲಗ್ನದ ಮನೆ ಅಂದರೆ ನಿಮ್ಮ ಮೊದಲನೇ ಮನೆಗೆ ಪ್ರವೇಶಿಸುತ್ತಾರೆ. ಪರಿಣಾಮವಾಗಿ ಕಳೆದ ಸಮಯದಲ್ಲಿ ನಿಮ್ಮ ಮೂಲಕ ಮಾಡಲಾದ ಪ್ರಯತ್ನಗಳ ಉತ್ತಮ ಫಲಿತಾಂಶವನ್ನು ನೀವು ಪಡೆಯುತ್ತೀರಿ. ಈ ಸಮಯ ನಿಮಗೆ ಅದ್ಭುತವಾಗಿರುತ್ತದೆ ಮತ್ತು ನಿಮ್ಮ ಭಾವನೆಗಳಲ್ಲಿ ಸಕಾರಾತ್ಮಕ ಬದಲಾವಣೆ ಬರುತ್ತದೆ. ಕುಟುಂಬವನ್ನು ಸಮನ್ವಯಗೊಳಿಸುವ ನಿಮ್ಮ ಪ್ರಯತ್ನಗಳು ಈ ಮಧ್ಯೆ ಯಶಸ್ವಿಯಾಗುತ್ತವೆ. ಯಾವುದೇ ತೀರ್ಮಾನಕ್ಕೆ ತಲುಪಲು ನಿಮ್ಮ ಬುದ್ಧಿವಂತಿಕೆಯನ್ನು ಬಳಸಿ ಮತ್ತು ಗೊಂದಲಕ್ಕೀಡಾಗಬೇಡಿ.
ಪರಿಹಾರ - ಹನುಮಂತ ದೇವರನ್ನು ಪೂಜಿಸಿ. 

 ವೃಷಭ ಸಾಪ್ತಾಹಿಕ ಜಾತಕ / Taurus Weekly Horoscope. 

(26 Oct 2020 - 1 Nov 2020)

ಈ ವಾರ ಚಂದ್ರ ದೇವ ವೃಷಭ ರಾಶಿಚಕ್ರದ ಸ್ಥಳೀಯರ ಹತ್ತನೇ, ಹನ್ನೊಂದನೇ ಮತ್ತು ಹನ್ನೆರಡನೇ ಮನೆಗೆ ಸಾಗುತ್ತಾರೆ.
ವಾರದ ಆರಂಭದಲ್ಲಿ ಚಂದ್ರ ನಿಮ್ಮ ಹತ್ತನೇ ಮನೆಗೆ ಪ್ರವೇಶಿಸುತ್ತಾರೆ. ಪರಿಣಾಮವಾಗಿ, ಕೆಲಸದ ಸ್ಥಳದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ರಾಶಿಚಕ್ರದ ಕೆಲವು ಸ್ಥಳೀಯರು ಈ ಸಮಯದಲ್ಲಿ ತಂಡವನ್ನು ಮುನ್ನಡೆಸುವ ಅವಕಾಶವನ್ನು ಪಡೆಯಬಹುದು. ನಿಮ್ಮ ಕೆಲಸ ಮಾಡುವ ರೀತಿಯಿಂದ ಹಿರಿಯ ಅಧಿಕಾರಿಗಳ ಮೇಲೆ ಪ್ರಭಾವ ಬೀರಬಹುದು. ಈ ರಾಶಿಚಕ್ರದ ಜನರು ತಮ್ಮ ಉದ್ದೇಶಗಳನ್ನು ಪೂರೈಸಲು ದೃಢ ನಿಶ್ಚಯದಿಂದ ಇರುತ್ತಾರೆ ಮತ್ತು ನಿಮ್ಮ ಸಿಲುಕಿಕೊಂಡಿರುವ ಕೆಲಸಗಳು ಸಹ ಪೂರ್ಣಗೊಳ್ಳುತ್ತವೆ, ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಯನ್ನು ಇರಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ.
ಇದರ ನಂತರ ಚಂದ್ರ ನಿಮ್ಮ ಹನ್ನೊಂದನೇ ಮನೆಗೆ ಸಾಗುತ್ತಾರೆ. ಪರಿಣಾಮವಾಗಿ ಜೀವನದ ಅನೇಕ ಕ್ಷೇತ್ರಗಳಿಂದ ಲಾಭವನ್ನು ಪಡೆಯುತ್ತೀರಿ. ಈ ರಾಶಿಚಕ್ರದ ಅನೇಕ ಸ್ಥಳೀಯರು ತಮ್ಮ ದೀರ್ಘಕಾಲದ ರೋಗಗಳಿಂದ ಮುಕ್ತರಾಗುತ್ತಾರೆ. ಈ ಸಮಯವು ನಿಮಗೆ ಸಮೃದ್ಧಿಯನ್ನು ತರುತ್ತದೆ. ಈ ಸಂಚಾರದ ಸಮಯದಲ್ಲಿ ಭೌತಿಕ ಜೀವನದಲ್ಲಿ ಲಾಭವನ್ನು ಪಡೆಯುತ್ತೀರಿ ಮತ್ತು ನಿಮ್ಮ ಬಯಕೆಗಳು ಪೂರ್ಣಗೊಳ್ಳುವ ಕಾರಣದಿಂದ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ. ಈ ಸಮಯದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಆದಾಗ್ಯೂ ನಿಮ್ಮ ವೈವಾಹಿಕ ಜೀವನವನ್ನು ನೀವು ಸುಗಮವಾಗಿ ನಡೆಸಲು ನಿಮ್ಮ ಸ್ವಭಾವವನ್ನು ನಿಯಂತ್ರಿಸಬೇಕು, ಇಲ್ಲದಿದ್ದರೆ ಜೀವನ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು.
ವಾರದ ಅಂತ್ಯದಲ್ಲಿ ಚಂದ್ರ ನಿಮ್ಮ ಹನ್ನೆರಡನೇ ಮನೆಗೆ ಸಾಗುತ್ತಾರೆ. ಈ ಸಮಯದಲ್ಲಿ ನೀವು ಸ್ವಲ್ಪ ಜಾರಾಗರೂಕರಾಗಿರಬೇಕು. ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು, ಆದಾಗ್ಯೂ ನಿಮ್ಮ ಸ್ವಂತ ಸೌಕರ್ಯಗಳಿಗಾಗಿ ನೀವು ಖರ್ಚು ಮಾಡುತ್ತೀರಿ. ಆದರೆ ವಾರದ ಅಂತ್ಯದಲ್ಲಿ ಇದರಿಂದ ನೀವು ತೊಂದರೆಗೆ ಒಳಗಾಗಬಹುದು. ಆದ್ದರಿಂದ ಬಜೆಟ್ ಯೋಜನೆಯನ್ನು ತಯಾರಿಸಿ ಮುಂದುವರಿಯಿರಿ. ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ವಿದೇಶಿ ಕೆಲಸಕ್ಕೆ ಸಂಬಂಧಿಸದಂತೆ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಈ ಸಮಸ್ಯೆಗಳನ್ನು ಪರಿಹರಿಸಲು ನೀವು ನಿಮ್ಮ ಸ್ನೇಹಿತರು ಅಥವಾ ಆಪ್ತರೊಂದಿಗೆ ಮಾತನಾಡಬಹುದು. ವಾರದ ಈ ಭಾಗದಲ್ಲಿ ಪ್ರಯಾಣಿಸುವುದು ನಿಮಗೆ ಕಷ್ಟವಾಗಿರುತ್ತದೆ. ಆದ್ದರಿಂದ ಯಾವುದೇ ಪ್ರಯಾಣವನ್ನು ತಪ್ಪಿಸಿ. ಪ್ರೇಮಿಗಳ ಮಧ್ಯೆ ಪ್ರತ್ಯೇಕತೆಯ ಸ್ಥಿತಿಯೂ ಇರುತ್ತದೆ.
ಪರಿಹಾರ - ಬಿಳಿ ವಸ್ತುಗಳ ದಾನ ಮಾಡುವುದು ನಿಮಗೆ ಉತ್ತಮ.

ಮಿಥುನ ಸಾಪ್ತಾಹಿಕ ಜಾತಕ / Gemini Weekly Horoscope.

(26 Oct 2020 - 1 Nov 2020)

 ಈ ವಾರ ಚಂದ್ರ ದೇವ ಮಿಥುನ ರಾಶಿಚಕ್ರದ ಸ್ಥಳೀಯರ ಒಂಬತ್ತನೇ, ಹತ್ತನೇ ಮತ್ತು ಹನ್ನೊಂದನೇ ಮನೆಗೆ ಸಾಗುತ್ತಾರೆ.
ವಾರದ ಆರಂಭದಲ್ಲಿ ಒಂಬತ್ತನೇ ಮನೆಯಲ್ಲಿನ ಚಂದ್ರನ ಸ್ಥಾನದಿಂದಾಗಿ ನೀವು ಧರ್ಮ ಮತ್ತು ಅಧ್ಯಾತ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಆಸಕ್ತಿ ಹೊಂದಬಹುದು ಮತ್ತು ಆಧ್ಯಾತ್ಮಿಕತೆಯನ್ನು ಆಶ್ರಯಿಸಿ ನೀವು ಮಾನಸಿಕ ಶಾಂತಿಯನ್ನು ಪಡೆಯಬಹುದು. ನೀವು ನಿಭಾವಯಿಸಲು ಕಷ್ಟವಾಗುವಂತಹ ಯಾವುದೇ ಭರವಸೆಯನ್ನು ನೀಡುವುದನ್ನು ಈ ಸಮಯದಲ್ಲಿ ನೀವು ತಪ್ಪಿಸಬೇಕು. ಈ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ನಿಮ್ಮ ಕುಟುಂಬ ಜೀವನದಲ್ಲಿ ಸ್ಥಿತಿ ಸಾಮಾನ್ಯವಾಗಿರುತ್ತದೆ ಮತ್ತು ಎಲ್ಲರ ಬೆಂಬಲವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಕುಟುಂಬದೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಆದರೂ ಕುಟುಂಬದ ಸದಸ್ಯರೊಂದಿಗೆ ಮಾತನಾಡುವಾಗ ನೀವು ನಿಮ್ಮ ಧ್ವನಿಯನ್ನು ನಿಯಂತ್ರಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ.
ವಾರದ ಮಧ್ಯದಲ್ಲಿ ಚಂದ್ರ ನಿಮ್ಮ ಹತ್ತನೇ ಮನೆಗೆ ಪ್ರವೇಶಿಸುವ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಿರಿ. ಭವಿಷ್ಯವನ್ನು ಸುಧಾರಿಸಲು ನೀವು ಹಿಂದೆ ಮಾಡಿದ ಪ್ರಯತ್ನಗಳ ಉತ್ತಮ ಫಲಿತಾಂಶಗಳನ್ನು ಸಹ ನೀವು ಪಡೆಯುತ್ತೀರಿ. ಕೆಲವು ಸ್ಥಳೀಯರು ಕೆಲಸದ ಸ್ಥಳದಲ್ಲಿ ಬಡ್ತಿ ಪಡೆಯುವ ಸಾಧ್ಯತೆಯೂ ಇದೆ. ಇದರೊಂದಿಗೆ ಇನ್ನೂ ನಿರೋದ್ಯೋಗಿಗಳಾಗಿದ್ದವರು ಸಹ ಉದ್ಯೋಗವನ್ನು ಪಡೆಯಬಹುದು.
ವಾರದ ಅಂತ್ಯದಲ್ಲಿ ಚಂದ್ರನ ಸಾಗಣೆ ನಿಮ್ಮ ಹನ್ನೊಂದನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಂಚಾರದ ಕಾರಣದಿಂದಾಗಿ ಹಿರಿಯ ಸಹೋದರ ಸಹೋದರಿಯರೊಂದಿಗೆ ನೀವು ಹೊಸ ಕೆಲಸವನ್ನು ಯೋಜಿಸಬಹುದು. ಈ ಸಮಯವೂ ನಿಮಗೆ ಸಮೃದ್ಧಿಯನ್ನು ತರಲಿದೆ. ಈ ರಾಶಿಚಕ್ರದ ವಿದ್ಯಾರ್ಥಿಗಳು ವಾರದ ಈ ಭಾಗದಲ್ಲಿ ಶಿಕ್ಷಣದ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನಿಮ್ಮ ಏಕಾಗ್ರತೆ ಹೆಚ್ಚಾಗಬಹುದು. ಇದರಿಂದ ಉತ್ತಮ ಯಶಸ್ಸು ಪಡೆಯಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ತಂದೆ ತಾಯಿ ಮತ್ತು ಶಿಕ್ಷಕರು ನಿಮ್ಮ ಪರಿಶ್ರಮ ಮತ್ತು ಉತ್ತಮ ಪ್ರದರ್ಶನದಿಂದ ಸಾಕಷ್ಟು ಸಂತೋಷಪಡುತ್ತಾರೆ.
ಪರಿಹಾರ - ಹಸುವಿಗೆ ಹಸಿರು ಮೇವು ನೀಡುವುದು ನಿಮಗೆ ಶುಭವಾಗಿರುತ್ತದೆ. 

ಕರ್ಕ ಸಾಪ್ತಾಹಿಕ ಜಾತಕ / Cancer Weekly Horoscope.

(26 Oct 2020 - 1 Nov 2020)

ಈ ವಾರ ಚಂದ್ರ ದೇವ ಕರ್ಕ ರಾಶಿಚಕ್ರದ ಸ್ಥಳೀಯಾಯ್ರ ಎಂಟನೇ, ಒಂಬತ್ತನೇ ಮತ್ತು ಹತ್ತನೇ ಮನೆಗೆ ಪ್ರವೇಶಿಸುತ್ತಾರೆ. ವಾರದ ಆರಂಭದಲ್ಲಿ ಚಂದ್ರ ನಿಮ್ಮ ಎಂಟನೇ ಮನೆಯಲ್ಲಿರುತ್ತಾರೆ. ಈ ಸಮಯದಲ್ಲಿ ನೀವು ತುಂಬಾ ಜಾರುಕರಾಗಿರುವ ಅಗತ್ಯವಿದೆ. ಈ ಸಮಯದಲ್ಲಿ ನೀವು ರಹಸ್ಯ ಹಣವನ್ನು ಸಹ ಪಡೆಯಬಹುದು. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ನೀವು ನಿಮ್ಮ ಹಳೆಯ ಬಿಲ್ ಇತ್ಯಾದಿಗಳನ್ನು ಬಹಳ ಸುಲಭವಾಗಿ ಪಾವತಿಸಲು ಸಾಧ್ಯವಾಗುತ್ತದೆ. ವ್ಯಾಪಾರದ ಹೊಸ ಮಾರ್ಗಗಳು ತೆರೆಯುತ್ತವೆ ಮತ್ತು ಲಾಭವನ್ನು ಪಡೆಯುವ ಹೆಚ್ಚಿನ ಸಾಧ್ಯತೆ ಇದೆ. ಈ ರಾಶಿಚಕ್ರದ ಕೆಲವು ಜನರು ವಾರದ ಈ ಭಾಗದಲ್ಲಿ ವಿದೇಶಕ್ಕೆ ಹೋಗಲು ಅವಕಾಶವನ್ನು ಪಡೆಯಬಹುದು.
ಇದರ ನಂತರ ಚಂದ್ರ ದೇವ ನಿಮ್ಮ ಒಂಬತ್ತನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಂಚಾರವು ನಿಮಗೆ ಉತ್ತಮವೆಂದು ಸಾಬೀತುಪಡಿಸುತ್ತದೆ. ಧರ್ಮ-ಕರ್ಮದ ಕೆಲಸಗಳ ಬಗ್ಗೆ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ ಮತ್ತು ಈ ಸಮಯದಲ್ಲಿ ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ. ಇದು ನಿಮ್ಮ ಹದಗೆಡುತ್ತಿರುವ ಕೆಲಸವನ್ನು ಸಹ ಪೂರ್ಣಗೊಳಿಸುತ್ತದೆ. ಕುಟುಂಬ ಜೀವನದ ಬಗ್ಗೆ ಮಾತಾಡಿದರೆ, ಮನೆಯ ಸದಸ್ಯರೊಂದಿಗೆ ಮಾತನಾಡುವ ಸಮಯದಲ್ಲಿ ನಿಮ್ಮ ಧ್ವನಿಯನ್ನು ನಿಯಂತ್ರಿಸಿ. ಈ ಸಮಯದಲ್ಲಿ ಅಧ್ಯಾತ್ಮವನ್ನು ಆಶ್ರಯಿಸಿ ಮಾನಸಿಕ ಶಾಂತಿಯನ್ನು ಪಡೆಯಬಹುದು. ಈ ಸಮಯದಲ್ಲಿ, ತಂದೆಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ ಮತ್ತು ಅವರ ಮೂಲಕ ಯಾವುದೇ ಪ್ರಯೋಜನಕಾರಿ ಸಲಹೆಯನ್ನು ನೀವು ಪಡೆಯಬಹುದು.
ವಾರದ ಅಂತ್ಯದಲ್ಲಿ ಚಂದ್ರನ ಸಾಗಣೆ ನಿಮ್ಮ ಹತ್ತನೇ ಮನೆಯಲ್ಲಿ ಸಂಭವಿಸಲಿದೆ. ಪರಿಣಾಮವಾಗಿ ನೀವು ಸಕ್ರಿಯರಾಗಿರುತ್ತೀರಿ. ಈ ರಾಶಿಚಕ್ರದ ವಿದ್ಯಾರ್ಥಿಗಳು ತಮ್ಮ ಗುರುಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ ಮತ್ತು ನೀವು ಯೋಚಿಸುತ್ತಿರುವುದಕ್ಕಿಂತ ಹೆಚ್ಚಿನ ಯಶಸ್ಸನ್ನು ನೀವು ಪಡೆಯುತ್ತೀರಿ. ಚಂದ್ರ ಈ ಮನೆಯಲ್ಲಿ ಪ್ರವೇಶಿಸಿದ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ನಿಮ್ಮ ಸಿಲುಕಿಕೊಂಡಿರುವ ಕೆಲಸಗಳು ಸಹ ಪೂರ್ಣಗೊಳ್ಳಬಹುದು. ಈ ರಾಶಿಚಕ್ರದ ಕೆಲವು ಸ್ಥಳೀಯರು ತಮ್ಮ ಕೆಲಸದ ಸ್ಥಳದಲ್ಲಿ ಗೌರವವನ್ನು ಪಡೆಯಬಹುದು. ಕೆಲಸ ಮಾಡುವ ನಿಮ್ಮ ರೀತಿಯ ಮೂಲಕ ನೀವು ನಿಮ್ಮ ಮೇಲಧಿಕಾರಿಗಳ ಮೇಲೆ ಪರಿಣಾಮ ಬೀರಬಹುದು.
ಪರಿಹಾರ - ಶಿವಲಿಂಗದ ಮೇಲೆ ಬಿಳಿ ಹೂವುಗಳನ್ನು ಅರ್ಪಿಸಿ.

ನಿಮ್ಮ ಸಮಸ್ಯೆ ಏನೇ ಇರಲಿ, ಕೇವಲ 3 ದಿನಗಳಲ್ಲಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಿದೆ. ಜ್ಯೋತಿಷ್ಯ, ಜಾತಕಶಾಸ್ತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಪಂಡಿತ್ ಶ್ರೀ ಚಂದ್ರ ಶೇಖರ್ ಗುರುಜಿ ಬಹಳ ಪ್ರಸಿದ್ಧ ವ್ಯಕ್ತಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆಯಲು ಈ ಸಂಖ್ಯೆಗೆ ಕರೆ ಮಾಡಿ.
ಮೊಬೈಲ್ ನಂಬರ :- 9845839481
ವೆಬ್‌ಸೈಟ್ :- http://www.raghavendraastro.com

ಸಿಂಹ ಸಾಪ್ತಾಹಿಕ ಜಾತಕ / Leo Weekly Horoscope. 

(26 Oct 2020 - 1 Nov 2020)

ಈ ವಾರ ಚಂದ್ರ ದೇವ ಸಿಂಹ ರಾಶಿಚಕ್ರದ ಸ್ಥಳೀಯರ ಏಳನೇ, ಎಂಟನೇ ಮತ್ತು ಒಂಬತ್ತನೇ ಮನೆಗೆ ಸಾಗಲಿದ್ದಾರೆ. ವಾರದ ಆರಂಭದಲ್ಲಿ ಚಂದ್ರ ದೇವ ನಿಮ್ಮ ಏಳನೇ ಮನೆಗೆ ಪ್ರವೇಶಿಸುತ್ತಾರೆ. ಈ ಮನೆಯನ್ನು ಮದುವೆ ಮತ್ತು ಪಾಲುದಾರಿಕೆಯ ಮನೆಯೆಂದು ಕರೆಯಲಾಗುತ್ತದೆ. ಈ ಮನೆಯಲ್ಲಿನ ಚಂದ್ರ ನೆಲೆಗೊಂಡಿರುವ ಕಾರಣದಿಂದಾಗಿ ನೀವು ಪಾಲುದಾರಿಕೆಯ ವ್ಯಾಪಾರದಲ್ಲಿ ಸಂಪೂರ್ಣ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ಕೆಲಸದ ವಿಷಯದಲ್ಲಿ ನೀವು ನಿಮ್ಮ ಸಂಗಾತಿಯ ಬೆಂಬಲವನ್ನು ಸಹ ಪಡೆಯುತ್ತೀರಿ ಮತ್ತು ವೈವಾಹಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಬರುತ್ತದೆ.
ವಾರದ ಮಧ್ಯದಲ್ಲಿ ಚಂದ್ರ ನಿಮ್ಮ ಎಂಟನೇ ಮನೆಗೆ ಸಾಗಾಣಿಸುವುದರಿಂದಾಗಿ ಜೀವನದಲ್ಲಿ ಅಡೆತಡೆಗಳು ಉಂಟಾಗಬಹುದು. ಈ ಸಮಯದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರುವ ಅಗತ್ಯವಿದೆ, ಏಕೆಂದರೆ ಅನಗತ್ಯ ಚಿಂತೆಗಳು ನಿಮ್ಮನ್ನು ತೊಂದರೆಗೊಳಿಸಬಹುದು. ಈ ಸ್ಥಿತಿಯಿಂದ ತಪ್ಪಿಸಲು ನಕಾರಾತ್ಮಕತೆಯಿಂದ ನಿಮ್ಮನ್ನು ದೂರವಿಡಿ ಮತ್ತು ಕಾನೂನು ಬಾಹಿರ ಕೆಲಸ ಮಾಡುವುದನ್ನು ತಪ್ಪಿಸಿ. ಈ ಸಮಯದಲ್ಲಿ ನಿಮ್ಮ ವಿರೋಧಿಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಧೈರ್ಯದಿಂದ ಮುಂದುವರಿಯುವ ಅಗತ್ಯವಿದೆ. ಸಕಾರಾತ್ಮಕತೆಯನ್ನು ಹೊಂದಲು ನೀವು ಉತ್ತಮ ಪುಸ್ತಕಗಳ ಅಧ್ಯಯನ ಮಾಡಬೇಕು ಮತ್ತು ಉತ್ತಮ ಜನರ ಸಹವಾಸದಲ್ಲಿರಬೇಕು.
ವಾರದ ಅಂತ್ಯದಲ್ಲಿ ಚಂದ್ರ ನಿಮ್ಮ ಒಂಬತ್ತನೇ ಮನೆಗೆ ಸಾಗುತ್ತಾರೆ, ಈ ಸಮಯದಲ್ಲಿ ನಿಮ್ಮ ಪರಿಸ್ಥಿತಿ ಸುಧಾರಿಸುತ್ತದೆ. ಧರ್ಮ - ಆಧ್ಯಾತ್ಮಿಕತೆಯ ಬಗ್ಗೆ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಕುಟುಂಬದೊಂದಿಗೆ ಯಾವುದೇ ಧಾರ್ಮಿಕ ಯಾತ್ರೆಗೆ ಹೋಗಲು ಯೋಜಿಸಬಹುದು. ಈ ಸಮಯದಲ್ಲಿ ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಸಹ ನೀವು ಮುಂದೆಬರುವಿರಿ. ಇದರೊಂದಿಗೆ ಸರ್ಕಾರದ ಮಾರ್ಗಸೂಚಿಗಳನ್ನು ಸರಿಯಾಗಿ ಅನುಸರಿಸಲು ನಿಮಗೆ ಸಲಹೆ ನೀಡಲಾಗಿದೆ, ಇಲ್ಲದಿದ್ದರೆ ನೀವು ಯಾವುದೇ ಸಮಸ್ಯೆಯಲ್ಲಿ ಸಿಲುಕಬಹುದು
ಪರಿಹಾರ - ಬೆಲ್ಲದ ದಾನ ಮಾಡುವುದು ನಿಮಗೆ ಶುಭವಾಗಿರುತ್ತದೆ.  

ಕನ್ಯಾ ಸಾಪ್ತಾಹಿಕ ಜಾತಕ / Virgo Weekly Horoscope. 

(26 Oct 2020 - 1 Nov 2020)

ಚಂದ್ರ್ರನ ಸಂಚಾರದಿಂದಾಗಿ ಕನ್ಯಾ ರಾಶಿಚಕ್ರದ ಸ್ಥಳೀಯರ ಆರನೇ, ಏಳನೇ ಮತ್ತು ಎಂಟನೇ ಮನೆಗಳು ಈ ವಾರ ಸಕ್ರಿಯವಾಗಿರುತ್ತವೆ.
ಆರನೇ ಮನೆಯಲ್ಲಿ ಚಂದ್ರನ ಸಂಚಾರವು ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ಯಾವುದೇ ದೀರ್ಘಕಾಲದ ಕಾಯಿಲೆಯಿಂದ ಮುಕ್ತರಾಗಬಹುದು. ಇದರೊಂದಿಗೆ ಉದ್ಯೋಗದಲ್ಲಿ ತೊಡಗಿರುವ ಜನರು. ಕೆಲಸದ ಸ್ಥಳದಲ್ಲಿ ತಮ್ಮ ಪ್ರತಿಸ್ಪರ್ಧಿಗಳ ಮೇಲೆ ಜಯ ಪಡೆಯುತ್ತಾರೆ. ಈ ರಾಶಿಚಕ್ರದ ವ್ಯಾಪಾರಸ್ಥರ ಪರಿಸ್ಥಿತಿ ಸುಧಾರಿಸುತ್ತದೆ. ನಿಮ್ಮ ಮನಸ್ಸಿನಲ್ಲಿ ಶಾಂತಿ ಇರುತ್ತದೆ ಮತ್ತು ವಿವಾದದ ಪರಿಸ್ಥಿತಿಯಿಂದ ನೀವು ದೂರವಿರುತ್ತೀರಿ, ಈ ಕಾರಣದಿಂದಾಗಿ ನಿಮ್ಮ ಜೀವನಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ.
ವಾರದ ಮಧ್ಯದಲ್ಲಿ ಚಂದ್ರ ನಿಮ್ಮ ಏಳನೇ ಮನೆಗೆ ಸಾಗುತ್ತಾರೆ. ಈ ಸಮಯದಲ್ಲಿ ನಿಮ್ಮ ದಾಂಪತ್ಯ ಜೀವನವು ಸುಧಾರಿಸುತ್ತದೆ. ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಪ್ರಣಯದ ಕ್ಷಣಗಳನ್ನು ಕಳೆಯಬಹುದು. ಮತ್ತೊಂದೆಡೆ, ಈ ರಾಶಿಚಕ್ರದ ಕೆಲವು ಜನರು ಪಾಲುದಾರಿಕೆಯ ವ್ಯಾಪಾರವನ್ನು ಆರಂಭಿಸುವ ಬಗ್ಗೆ ಆಲೋಚಿಸಬಹುದು. ಇದರಲ್ಲಿ ಸಾಕಷ್ಟು ಮಟ್ಟಿಗೆ ನೀವು ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಆದಾಗ್ಯೂ, ಇದರ ಬಗ್ಗೆ ನಿಮ್ಮ ಕುಟುಂಬದ ಹಿರಿಯ ಸದಸ್ಯರ ಸಲಹೆಯನ್ನು ನೀವು ಪಡೆದುಕೊಳ್ಳಬೇಕು.
ವಾರದ ಅಂತ್ಯದಲ್ಲಿ ಚಂದ್ರನ ಸಾಗಣೆ ನಿಮ್ಮ ಎಂಟನೇ ಮನೆಯಲ್ಲಿರುತ್ತದೆ. ಈ ಸಮಯವೂ ನಿಮಗೆ ಹೆಚ್ಚು ಅನುಕೂಲಕರವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು. ನಿಮ್ಮ ಮಾನಸಿಕ ಆರೋಗ್ಯವನ್ನು ಆರೋಗ್ಯವಾಗಿರಿಸಲು ನೀವು ಯೋಗ ಧ್ಯಾನವನ್ನು ಆಶ್ರಯಿಸಬೇಕು. ಶಿಕ್ಷಣವನ್ನು ಗಳಿಸುತ್ತಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಧ್ಯಾನವನ್ನು ಆಶ್ರಯಿಸುವ ಅಗತ್ಯವಿದೆ. ಈ ವಾರ ತಂದೆಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ
ಪರಿಹಾರ - ಗಂ ಗಣಪತಯೇ ನಮಃ ಮಂತ್ರವನ್ನು ನಿಯಮಿತವಾಗಿ ಜಪಿಸಿ.  

ತುಲಾ ಸಾಪ್ತಾಹಿಕ ಜಾತಕ / Libra Weekly Horoscope. 

(26 Oct 2020 - 1 Nov 2020)

ಈ ವಾರ ಚಂದ್ರ ದೇವ ತುಲಾ ರಾಶಿಚಕ್ರದ ಸ್ಥಳೀಯರ ಐದನೇ, ಆರನೇ ಮತ್ತು ಏಕನೆ ಮನೆಗೆ ಸಾಗುತ್ತದೆ. ವಾರದ ಆರಂಭದಲ್ಲಿ ಚಂದ್ರ ನಿಮ್ಮ ಐದನೇ ಮನೆಯಲ್ಲಿರುವ ಕಾರಣದಿಂದಾಗಿ ನಿಮ್ಮ ಸೃಜನಶೀಕತೆ ಉತ್ತುಂಗದಲ್ಲಿರುತ್ತದೆ. ಶಿಕ್ಷಣದ ಕ್ಷೇತ್ರದಲ್ಲಿ ನೀವು ನಿಮ್ಮ ಪೋಷಕರು ಮತ್ತು ಗುರುಗಳ ಬೆಂಬಲವನ್ನು ಪಡೆಯುತ್ತೀರಿ. ಈ ಕಾರಣದಿಂದಾಗಿ ಶಿಕ್ಷಣದ ಕ್ಷೇತ್ರದಲ್ಲಿ ನೀವು ಉತ್ತಮ ಪ್ರದರ್ಶನ ಮಾಡಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಭೌದ್ಧಿಕ ಸಾಮರ್ಥ್ಯವು ಹೆಚ್ಚಾಗುತ್ತದೆ. ವಿಶೇಷವಾಗಿ ಈ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಈ ಸಮಯವೂ ಸಾಕಷ್ಟು ಉತ್ತಮವಾಗಿರಲಿದೆ. ಮಕ್ಕಳ ಬದಿಯಿಂದ ಈ ರಾಶಿಚಕ್ರದ ಸ್ಥಳೀಯರು ಶುಭ ಸುದ್ಧಿಯನ್ನು ಪಡೆಯಬಹುದು.
ವಾರದ ಮಧ್ಯದಲ್ಲಿ ಚಂದ್ರ ನಿಮ್ಮ ಆರನೇ ಮನೆಗೆ ಸಾಗುತ್ತಾರೆ. ದೀರ್ಘಕಾಲದಿಂದ ಯಾವುದೇ ರೋಗದಿಂದ ನೀವು ಬಳಲುತ್ತಿದ್ದರೆ, ಈ ಸಮಯದಲ್ಲಿ ಅದರಿಂದಲೂ ನೀವು ಮುಕ್ತರಾಗಬಹುದು. ಈ ರಾಶಿಚಕ್ರದ ವೃತ್ತಿಪರ ಜನರ ವಿರೋಧಿಗಳು ಈ ಸಮಯದಲ್ಲಿ ಶಾಂತರಾಗಿರುತ್ತಾರೆ. ಏಕೆಂದರೆ ನಿಮ್ಮ ಆಕ್ರಮಣಶೀಲತೆ ಮತ್ತು ಬುದ್ಧಿವಂತಿಕೆಯಿಂದ ನೀವು ಅವರನ್ನು ಸೋಲಿಸಬಹುದು
ವಾರದ ಅಂತ್ಯದಲ್ಲಿ ಚಂದ್ರನ ಸಾಗಣೆ ನಿಮ್ಮ ಏಳನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಮಯ ಶುಭವಾಗಿರುತ್ತದೆ ಮತ್ತು ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ಪ್ರಯೋಜನವನ್ನು ಪಡೆಯಬಹುದು. ಇದರೊಂದಿಗೆ ಕುಟುಂಬ ಜೀವನದಲ್ಲಿ ಕೂಡ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
ಪರಿಹಾರ - ಪೋಷಕರ ಆಶೀರ್ವಾದವನ್ನು ಪಡೆಯಿರಿ.  

ವೃಶ್ಚಿಕ ಸಾಪ್ತಾಹಿಕ ಜಾತಕ / Scorpio Weekly Horoscope. 

(26 Oct 2020 - 1 Nov 2020)

ಈ ವಾರ ಚಂದ್ರ ದೇವ ವೃಶ್ಚಿಕ ರಾಶಿಚಕ್ರದ ಸ್ಥಳೀಯರ ನಾಲ್ಕನೇ, ಐದನೇ ಮತ್ತು ಆರನೇ ಮನೆಗೆ ಸಾಗುತ್ತಾರೆ. ವಾರದ ಆರಂಭದಲ್ಲಿ ಚಂದ್ರ ನಿಮ್ಮ ನಾಲ್ಕನೇ ಮನೆಗೆ ಸಾಗಿದಾಗ, ನೀವು ಗೊಂದಲಕ್ಕೆ ಒಳಗಾಗಬಹುದು. ಈ ಸಮಯದಲ್ಲಿ ಕುಟುಂಬದ ಸದಸ್ಯರೊಂದಿಗೆ ಸಮನ್ವಯವನ್ನು ಹೊಂದಲು ನೀವು ಮುಂದೆ ಬರಬೇಕು ಮತ್ತು ಮನೆಯ ಸದಸ್ಯರ ಮನಸ್ಸಿನಲ್ಲಿ ನಡೆಯುತ್ತಿರುವ ತಪ್ಪುಗ್ರಹಿಕೆಗಳನ್ನು ಪರಿಹರಿಸಬೇಕು. ವಾಹನವನ್ನು ಚಲಾಯಿಸುವ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಏಕೆಂದರೆ ಈ ವಾರ ಯಾವುದೇ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಈ ಸಮಯದಲ್ಲಿ ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ. ಅವರಿಗೆ ಯಾವುದೇ ರೋಗವಿದ್ದರೆ, ತಕ್ಷಣ ಅವರಿಗೆ ಉತ್ತಮ ವೈದ್ಯರ ಚಿಕಿತ್ಸೆಯನ್ನು ನೀಡಿ. ಕುಟುಂಬ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕುಟುಂಬದ ಹಿರಿಯ ಸದಸ್ಯರೊಂದಿಗೆ ನಿಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿ ಅವರ ಸಲಹೆಯನ್ನು ಪಡೆದುಕೊಳ್ಳಬಹುದು.
ವಾರದ ಮಧ್ಯದಲ್ಲಿ ಚಂದ್ರ ನಿಮ್ಮ ಐದನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಮಯದಲ್ಲಿ ಈ ರಾಶಿಚಕ್ರದ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಕ್ಷೇತ್ರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಧ್ಯಯನದಲ್ಲಿ ನೀವು ಮನಸ್ಸು ಹೊಂದಿರುವುದಿಲ್ಲ. ಈ ಸಮಯದಲ್ಲಿ ಯಾವುದೇ ಕೆಲಸವನ್ನು ಬಲವಂತವಾಗಿ ನಿಮ್ಮ ಕೈಯಲ್ಲಿ ತೆಗೆದುಕೊಳ್ಳುವುದನ್ನು ನೀವು ತಪ್ಪಿಸಬೇಕು, ಇಲ್ಲದಿದ್ದರೆ ನಿಮಗೆ ಸಮಸ್ಯೆ ಉಂಟಾಗಬಹುದು.
ವಾರದ ಅಂತ್ಯದಲ್ಲಿ ಚಂದ್ರ ನಿಮ್ಮ ಆರನೇ ಮನೆಗೆ ಸಾಗುತ್ತಾರೆ, ಇದರಿಂದಾಗಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಬೆಂಬಲವನ್ನು ಪಡೆಯುತ್ತಾರೆ . ಇದಲ್ಲದೆ ಈ ಸಮಯದಲ್ಲಿ ನಿಮ್ಮ ಎದುರಾಳಿಗಳು ಸಹ ಶಾಂತವಾಗಿರುತ್ತಾರೆ. ಈ ಸಮಯದಲ್ಲಿ ನಿಮ್ಮ ವಿರೋಧಿಗಳು ಸೋಲುತ್ತಾರೆ ಮತ್ತು ನಿಮ್ಮ ಕಾರ್ಯಗಳಲ್ಲಿ ನೀವು ಯಶಸ್ಸು ಪಡೆಯುತ್ತೀರಿ.
ಪರಿಹಾರ - ಪ್ರತಿದಿನ ನಿಯಮಿತವಾಗಿ ಹನುಮಾನ್ ಚಾಲೀಸವನ್ನು ಪಠಿಸುವುದು ನಿಮಗೆ ಉತ್ತಮ. 

ನಿಮ್ಮ ಸಮಸ್ಯೆ ಏನೇ ಇರಲಿ, ಕೇವಲ 3 ದಿನಗಳಲ್ಲಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಿದೆ. ಜ್ಯೋತಿಷ್ಯ, ಜಾತಕಶಾಸ್ತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಪಂಡಿತ್ ಶ್ರೀ ಚಂದ್ರ ಶೇಖರ್ ಗುರುಜಿ ಬಹಳ ಪ್ರಸಿದ್ಧ ವ್ಯಕ್ತಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆಯಲು ಈ ಸಂಖ್ಯೆಗೆ ಕರೆ ಮಾಡಿ.
ಮೊಬೈಲ್ ನಂಬರ :- 9845839481
ವೆಬ್‌ಸೈಟ್ :- http://www.raghavendraastro.com

 

ಧನು ಸಾಪ್ತಾಹಿಕ ಜಾತಕ / Sagittarius Weekly Horoscope. 

(26 Oct 2020 - 1 Nov 2020)

ಈ ವಾರ ಚಂದ್ರ ದೇವ ಧನು ರಾಶಿಚಕ್ರದ ಸ್ಥಳೀಯರ ಮೂರನೇ, ನಾಲ್ಕನೇ ಮತ್ತು ಐದನೇ ಮನೆಗೆ ಸಾಗಲಿದ್ದಾರೆ. ಆದ್ದರಿಂದ ನಿಮ್ಮ ಈ ಮನೆಗಳು ಸಕ್ರಿಯವಾಗಿರುತ್ತವೆ ಮತ್ತು ಇವುಗಳ ಪ್ರಕಾರ ಈ ವಾರ ನೀವು ಫಲಿತಾಂಶಗಳನ್ನು ಪಡೆಯುತ್ತೀರಿ.
ವಾರದ ಆರಂಭದಲ್ಲಿ ಚಂದ್ರ ನಿಮ್ಮ ಮೂರನೇ ಮನೆಯಲ್ಲಿರುತ್ತಾರೆ, ಈ ಕಾರಣದಿಂದಾಗಿ ಈ ಸಮಯದಲ್ಲಿ ನೀವು ಸಕ್ರಿಯರಾಗಿರುತ್ತೀರಿ. ಈ ಸಮಯದಲ್ಲಿ ನಿಮ್ಮ ಧೈರ್ಯ ಮತ್ತು ಪರಾಕ್ರಮವು ಹೆಚ್ಚಾಗುತ್ತದೆ. ನೀವು ಆಗಾಗ್ಗೆ ಮಾಡಲು ಹಿಂಜರಿಯುತ್ತಿದ್ದ ಕೆಲಸಗಳನ್ನು ಸಹ ಈ ಸಮಯದಲ್ಲಿ ಸುಲಭವಾಗಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಈ ವಾರ ಸ್ನೇಹಿತರೊಂದಿಗೆ ಎಲ್ಲಾದರೂ ಸುತ್ತಾಡಲು ಪ್ರವಾಸವನ್ನು ಯೋಜಿಸಬಹುದು. ಕುಟುಂಬದ ವಾತಾವರಣವು ಉತ್ತಮವಾಗಿರುತ್ತದೆ. ಕಿಟಿಯ ಸಹೋದರ ಸಹೋದರಿಯರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಈ ಕಾರಣದಿಂದಾಗಿ ನಿಮ್ಮ ನಡುವೆ ಪ್ರೀತಿ ಹೆಚ್ಚಾಗುತ್ತದೆ.
ವಾರದ ಮಧ್ಯದಲ್ಲಿ ಚಂದ್ರ ನಿಮ್ಮ ನಾಲ್ಕನೇ ಮನೆಗೆ ಸಾಗುತ್ತಾರೆ. ಇದು ನಿಮ್ಮ ತಾಯಿಯ ಆರೋಗ್ಯದ ಮೇಲೆ ಪ್ರತಿಕೂಲಕರ ಪರಿಣಾಮವನ್ನು ಬೀರಬಹುದು. ಆದ್ದರಿಂದ ಅವರ ಬಗ್ಗೆ ಕಾಳಜಿ ವಹಿಸಿ ಮತ್ತು ಉತ್ತಮ ವೈದ್ಯರ ಮೂಲಕ ಚಿಕಿತ್ಸೆಯನ್ನು ನೀಡಿ. ನಿಮ್ಮ ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಮನೆಯ ಸೌಕರ್ಯಗಳು ಅಥವಾ ನವೀಕರಣಕ್ಕೆ ಸಂಬಂಧಿಸಿದ ಕೆಲವು ವೆಚ್ಚಗಳು ಇರಬಹುದು.
ವಾರದ ಅಂತ್ಯದಲ್ಲಿ ಚಂದ್ರ ನಿಮ್ಮ ಐದನೇ ಮನೆಗೆ ಹಾದುಹೋಗುತಾರೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಕ್ಷೇತ್ರದಲ್ಲಿ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಮತ್ತೊಂದೆಡೆ, ಈ ರಾಶಿಚಕ್ರದ ವಿವಾಹಿತ ಜನರು ತಮ್ಮ ಮಕ್ಕಳ ಬದಿಯಿಂದ ಯಾವುದೇ ಸಂತೋಷದ ಸುದ್ಧಿಯನ್ನು ಪಡೆಯಬಹುದು.
ಪರಿಹಾರ - ಹಳದಿ ವಸ್ತುಗಳ ದಾನ ಮಾಡುವುದು ನಿಮಗೆ ಉತ್ತಮ. 

ಮಕರ ಸಾಪ್ತಾಹಿಕ ಜಾತಕ / Capricorn Weekly Horoscope.

 (26 Oct 2020 - 1 Nov 2020)

ಈ ವಾರ ಚಂದ್ರ ದೇವ ಮಕರ ರಾಶಿಚಕ್ರದ ಸ್ಥಳೀಯರ ಎರಡನೇ, ಮೂರನೇ ಮತ್ತು ನಾಲ್ಕನೇ ಮನೆಗೆ ಸಾಗುತ್ತಾರೆ.
ಎರಡನೇ ಮನೆಯಲ್ಲಿ ಚಂದ್ರ ಸಂಚಾರದ ಸಮಯದಲ್ಲಿ ನಿಮ್ಮ ಕುಟುಂಬ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ವಾರದ ಆರಂಭದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ವೆಚ್ಚಗಳ ಬಗ್ಗೆ ವಿಶೇಷ ಗಮನ ಹರಿಸುವ ಅಗತ್ಯವಿರುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುವ ಸಂಪೂರ್ಣ ಸಾಧ್ಯತೆ ಇದೆ. ಸಾಮಾಜಿಕ ಮಟ್ಟದಲ್ಲಿ ಮಾತನಾಡುವ ಸಮಯದಲ್ಲಿ ನೀವು ನಿಮ್ಮ ಪದಗಳನ್ನು ಚಿಂತನಶೀಲವಾಗಿ ಬಳಸಿ. ನಿಮ್ಮ ಮಾತುಗಳಲ್ಲಿ ಸೌಮ್ಯತೆಯನ್ನು ಇಟ್ಟುಕೊಂಡರೆ, ಅನೇಕ ಸಮಸ್ಯೆಗಳನ್ನು ನೀವು ತಪ್ಪಿಸಬಹುದು.
ವಾರದ ಮಧ್ಯದಲ್ಲಿ ಚಂದ್ರ ನಿಮ್ಮ ಮೂರನೇ ಮನೆಗೆ ಸಾಗುತ್ತಾರೆ. ಈ ಕಾರಣದಿಂದಾಗಿ ಅನಗತ್ಯ ವಸ್ತುಗಳಿಗಿಂತ ಹೆಚ್ಚು ಉಪಯುಕ್ತವಾದ ವಿಷಯಗಳ ಬಗ್ಗೆ ನೀವು ಗಮನ ಹರಿಸುತ್ತೀರಿ. ಈ ಸಮಯದಲ್ಲಿ ಭವಿಷ್ಯವನ್ನು ಸುಧಾರಿಸಲು ಯೋಜಿಸುತ್ತಿರಿ. ಮನೆಯಲ್ಲಿನ ಕಿರಿಯ ಸದ್ಸ್ಯರೊಬ್ಬರೊಂದಿಗೆ ಯಾವುದೇ ವಿರೋಧಾಭಾಸ ನಡೆಯುತ್ತಿದ್ದರೆ, ಅದನ್ನು ಸಹ ಈ ಸಮಯದಲ್ಲಿ ಪರಿಹರಿಸಲಾಗಬಹುದು ಮತ್ತು ಅವರಿಗೆ ಸಹಾಯ ಮಾಡಲು ಸಹ ನೀವು ಮುಂದೆ ಬರಬಹುದು. ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮ ಮನೋಬಲವನ್ನು ಕಡಿಮೆ ಮಾಡಿಕೊಳ್ಳಬೇಡಿ ಎಂದು ನಿಮಗೆ ಸಲಹೆ ನೀಡಲಾಗಿದೆ.
ವಾರದ ಅಂತ್ಯದಲ್ಲಿ ಚಂದ್ರನ ಸಾಗಣೆ ನಿಮ್ಮ ನಾಲ್ಕನೇ ಮನೆಯಲ್ಲಿರುತ್ತದೆ. ಈ ಸಮಯದಲ್ಲಿ ನಿಮ್ಮ ತಾಯಿಯ ಬೆಂಬಲವನ್ನು ನೀವು ಪಡೆಯಬಹುದು. ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ನಿಮಗೆ ಅಗತ್ಯವಿರುವ ವಸ್ತುಗಳ ಮೇಲೆ ನೀವು ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡಬಹುದು. ಇದರಿಂದಾಗಿ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಇದನ್ನು ಹೊರೆತುಪಡಿಸಿ, ನಿಮ್ಮ ಬಳಿ ಇರುವ ಯಾವುದೇ ಸಂಪತ್ತಿನ ಮೂಲಕ ನೀವು ಲಾಭವನ್ನು ಪಡೆಯಬಹುದು.
ಪರಿಹಾರ - ಅಗತ್ಯವಿರುವವರಿಗೆ ಸೇವೆ 

ಕುಂಭ ಸಾಪ್ತಾಹಿಕ ಜಾತಕ / Aquarius Weekly Horoscope.

 (26 Oct 2020 - 1 Nov 2020)

ಈ ವಾರ ಚಂದ್ರ ದೇವ ಕುಂಭ ರಾಶಿಚಕ್ರದ ಸ್ಥಳೀಯರ ಮೊದಲನೇ, ಎರಡನೇ ಮತ್ತು ಮನೆಗೆ ಸಾಗುತ್ತಾರೆ.
ವಾರದ ಆರಂಭವು ನಿಮಗೆ ಉತ್ತಮವಾಗಿರುತ್ತದೆ. ನಿಮ್ಮ ಲಗ್ನದ ಮನೆಯಲ್ಲಿ ಚಂದ್ರ ನೆಲೆಗೊಂಡಿರುವ ಕಾರಣದಿಂದಾಗಿ ನಿಮ್ಮ ಭಾವನೆಗಳಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾಗುತ್ತದೆ. ಯಾವುದೇ ರೀತಿಯ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ದರೆ, ಈ ಸಮಯದಲ್ಲಿ ಅವುಗಳನ್ನು ಪರಿಹರಿಸಬಹುದು. ಆರೋಗ್ಯದಲ್ಲೂ ಸಕಾರಾತ್ಮಕ ಬದಲಾವಣೆ ಬರುವ ಸಂಪೂರ್ಣ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಸ್ವಲೀನತೆಯನ್ನು ಹೊಂದಬಹುದು ಮತ್ತು ಜೀವನವನ್ನು ಸುಧಾರಿಸಲು ವೃದ್ಧರ ಸೇವೆ ಮಾಡಿ ಮತ್ತು ಅವರ ಸಲಹೆಯನ್ನು ಪಡೆದುಕೊಳ್ಳಿ.
ವಾರದ ಮಧ್ಯದಲ್ಲಿ ಚಂದ್ರ ನಿಮ್ಮ ಎರಡನೇ ಮನೆಗೆ ಸಾಗಿದಾಗ, ಹಣಕಾಸಿಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ನಿರ್ಲಕ್ಷ್ಯ ವಹಿಸುವುದು ನಿಮಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ವಾರ ಕುಟುಂಬ ಜೀವನದಲ್ಲಿ ಹಿರಿಯ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು. ಸಾಮಾಜಿಕ ಮಟ್ಟದಲ್ಲಿ ಜನರೊಂದಿಗೆ ಮಾತನಾಡುವ ಸಮಯದಲ್ಲಿ ಸಂಯಮದಿಂದಿರಿ.
ವಾರದ ಅಂತ್ಯದಲ್ಲಿ ಚಂದ್ರ ನಿಮ್ಮ ಮೂರನೇ ಮನೆಗೆ ಪ್ರವೇಶಿಸುತ್ತಾರೆ. ಇದು ಧೈರ್ಯ ಮತ್ತು ಪರಾಕ್ರಮದ ಮನೆ. ಈ ಮನೆಯಲ್ಲಿ ಚಂದ್ರನ ಸಂಚಾರದ ಪರಿಣಾಮದಿಂದಾಗಿ, ವೃತ್ತಿಪರ ಜನರು ತಮ್ಮ ಕೆಲಸದ ಸ್ಥಳದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ನೀವು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಂಪೂರ್ಣ ಫಲಿತಾಂಶವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಹೆಚ್ಚಿನ ಸಮಯವನ್ನು ಕುಟುಂಬದ ಸದಸ್ಯರೊಂದಿಗೆ ಕಳೆಯಲು ಬಯಸುತ್ತೀರಿ.
ಪರಿಹಾರ - ಶುಭ ಫಲಿತಾಂಶಗಳನ್ನು ಪಡೆಯಲು ಎಣ್ಣೆಯ ದಾನ ಮಾಡಿ.  

ಮೀನ ಸಾಪ್ತಾಹಿಕ ಜಾತಕ / Pisces Weekly Horoscope. 

(26 Oct 2020 - 1 Nov 2020) 

ಈ ವಾರ ಚಂದ್ರ ದೇವ ಮೀನಾ ರಾಶಿಚಕ್ರದ ಸ್ಥಳೀಯರ ಹನ್ನೆರಡನೇ, ಮೊದಲನೇ ಮತ್ತು ಎರಡನೇ ಮನೆಗೆ ಸಾಗಲಿದ್ದಾರೆ.
ವಾರದ ಆರಂಭದಲ್ಲಿ ಚಂದ್ರ ನಿಮ್ಮ ಹನ್ನೆರಡನೇ ಮನೆಯಲ್ಲಿ ಇರುತ್ತಾರೆ. ಇದನ್ನು ನಷ್ಟದ ಮನೆಯೆಂದು ಕರೆಯಲಾಗುತ್ತದೆ. ಈ ಮನೆಯಲ್ಲಿ ಚಂದ್ರನ ಸಾಗಣೆಯಿಂದಾಗಿ, ಹಣಕಾಸಿಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಸಾಕಷ್ಟು ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ನಿಮ್ಮ ಆರ್ಥಿಕ ಭಾಗವು ಸ್ವಲ್ಪ ದಿಗ್ಭ್ರಮೆಗೊಳ್ಳಬಹುದು. ಈ ಸಮಯದಲ್ಲಿ ಹಣಕ್ಕೆ ಸಮಂಧಿಸಿದ ಯಾವುದೇ ಹೂಡಿಕೆಯನ್ನು ತಪ್ಪಿಸಿ ಮತ್ತು ನಿಮ್ಮ ವೆಚ್ಚಗಳನ್ನು ನಿಯಂತ್ರಿಸಿ. ವಿದೇಶದೊಂದಿಗೆ ವ್ಯಾಪಾರದಲ್ಲಿ ತೊಡಗಿರುವವರು ಅಥವಾ ವಿದೇಶಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಈ ರಾಶಿಚಕ್ರದ ಸ್ಥಳೀಯರಿಗೆ ಈ ವಾರ ಉತ್ತಮವಾಗಿರಲಿದೆ. ನೀವು ಬಡ್ತಿ ಅಥವಾ ವ್ಯಾಪಾರದಲ್ಲಿ ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.
ವಾರದ ಮಧ್ಯದಲ್ಲಿ ಚಂದ್ರ ನಿಮ್ಮ ಲಗ್ನದ ಮನೆ ಅಂದರೆ ನಿಮ್ಮ ಮೊದಲನೇ ಮನೆಗೆ ಪ್ರವೇಶಿಸುತ್ತಾರೆ, ಇದರಿಂದಾಗಿ ಜೀವನದಲ್ಲಿ ಸಮತೋಲನ ಬರುತ್ತದೆ ಮತ್ತು ನಿಮ್ಮ ಮಾನಸಿಕ ಶಕ್ತಿನ್ ಹೆಚ್ಚಾಗುತ್ತದೆ. ದೀರ್ಘಕಾಲದಿಂದ ನಿಮ್ಮ ಸಿಲುಕಿಕೊಂಡಿರುವ ಕಾರ್ಯಗಳು ಪೂರ್ಣಗೊಳ್ಳಲು ಆರಂಭಿಸುತ್ತವೆ ಮತ್ತು ನೀವು ಯಾವುದೇ ಅವಶ್ಯಕ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಈ ಸಮಯದಲ್ಲಿ ನಿಮ್ಮ ಸ್ವಭಾವವು ಯೋಗ್ಯವಾಗಿ ಕಾಣುತ್ತದೆ. ಈ ಸಮಯದಲ್ಲಿ ದೈಹಿಕವಾಗಿ ಸಹ ನೀವು ಬಲವಾಗಿ ಕಾಣುತ್ತೀರಿ.
ವಾರದ ಅಂತ್ಯದಲ್ಲಿ ಚಂದ್ರ ನಿಮ್ಮ ಎರಡನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಮಯದಲ್ಲಿ ನಿಮ್ಮ ನಿಮ್ಮ ಮಾತುಗಳು ವೇಗಗೊಳ್ಳುತ್ತವೆ. ಆದ್ದರಿಂದ ಮಾತನಾಡುವ ಸಮಯದಲ್ಲಿ ನಿಮ್ಮ ಪದಗಳನ್ನು ಎಚ್ಚರಿಕೆಯಿಂದ ಆರಿಸಿ. ಏಕೆಂದರೆ ನಿಮ್ಮ ಮೂಲಕ ಹೇಳಲಾಗುವ ಮಾತುಗಳು ಯಾರನ್ನಾದರೂ ನೋಯಿಸಬಹುದು. ಕುಟುಂಬ ಜೀವನದಲ್ಲೂ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಇದಲ್ಲದೆ ತಂದೆ ತಾಯಿಯೊಂದಿಗೆ ಮಾತನಾಡುವ ಸಮಯದಲ್ಲಿ ಸಹ ನಿಮ್ಮ ಪದಗಳ ಬಗ್ಗೆ ಗಮನ ಹರಿಸಿ.
ಪರಿಹಾರ - ವಿಷ್ಣು ದೇವರನ್ನು ಸ್ವಚ್ಛವಾದ ಹೃದಯದಿಂದ ಪೂಜಿಸಿ.  

ನಿಮ್ಮ ಸಮಸ್ಯೆ ಏನೇ ಇರಲಿ, ಕೇವಲ 3 ದಿನಗಳಲ್ಲಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಿದೆ. ಜ್ಯೋತಿಷ್ಯ, ಜಾತಕಶಾಸ್ತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಪಂಡಿತ್ ಶ್ರೀ ಚಂದ್ರ ಶೇಖರ್ ಗುರುಜಿ ಬಹಳ ಪ್ರಸಿದ್ಧ ವ್ಯಕ್ತಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆಯಲು ಈ ಸಂಖ್ಯೆಗೆ ಕರೆ ಮಾಡಿ.
ಮೊಬೈಲ್ ನಂಬರ :- 9845839481
ವೆಬ್‌ಸೈಟ್ :- http://www.raghavendraastro.com

 

Comments